ಝೀಬ್ರ
	ಆಫ್ರಿಕದಲ್ಲಿ ಮಾತ್ರ ಕಾಣದೊರೆಯುವ ಸಸ್ತನಿ. ಪೆರಿಸೊ ಡ್ಯಾಕ್ಟಿಲ ಗಣದ ಎಕ್ವಿಡೀ ಕುಟುಂಬಕ್ಕೆ ಸೇರಿದೆ. ಕತ್ತೆ, ಕುದುರೆ, ಕ್ವ್ಯಾಗಗಳ ಹತ್ತಿರ ಸಂಬಂಧಿ. ಜಾತಿಯ ಶಾಸ್ತ್ರೀಯ ಹೆಸರು ಈಕ್ವಸ್. ಇದರಲ್ಲಿ ಈಕ್ವಸ್ ಬರ್ಚೆಲೈ (ಬರ್ಚೆಲ್ಸ್ ಜಿóೀಬ್ರ), ಈಕ್ವಸ್ ಜಿóೀಬ್ರ (ಬೆಟ್ಟಸೀಮೆಯ ಜೀóಬ್ರ), ಮತ್ತು ಈಕ್ವಸ್ ಗ್ರೇವಿಯೈ (ಗ್ರೇವಿಸ್ ಜೀóಬ್ರ) ಎಂಬ ಮೂರು ಪ್ರಭೇಧಗಳುಂಟು. ಬರ್ಚೆಲ್ಸ್ ಜಿóೀಬ್ರದಲ್ಲಿ ಹಲವಾರು ಬಗೆಗಳಿವೆ. ಜೀóಬ್ರದ ಬಾಹ್ಯರೂಪ ಹೆಚ್ಚು ಕಡಿಮೆ ಕುದುರೆಯಂತೆ. ಆದರೆ ಇದು ಗಾತ್ರದಲ್ಲಿ ಕುದುರೆಗಿಂತ ಚಿಕ್ಕದು, ಕತ್ತೆಗಿಂತ ದೊಡ್ಡದು. ಬೆಟ್ಟ ಸೀಮೆಯ ಜೀóಬ್ರ ಸುಮಾರು 1.22 m. ಎತ್ತರ ಇದೆಯಾದರೆ ಬರ್ಚೆಲ್ಸ್ ಜಿóೀಬ್ರ 1.28 m. ಎತ್ತರವೂ ಗ್ರೇವೀಸ್ ಜಿóೀಬ್ರ 1.40 m. ಎತ್ತರವೂ ಇದೆ, ತೂಕ ಸುಮಾರು 340 ಞg . ಜಿóೀಬ್ರದ ಮೈ ಬಿಳಿ ಬಣ್ಣದ ಹಿನ್ನಲೆಯಲ್ಲಿ ಕಪ್ಪುಪಟ್ಟೆಗಳಿವೆಯೊ ಕಪ್ಪು ಬಣ್ಣದ ಹಿನ್ನಲೆಯಲ್ಲಿ ಬಿಳಿ ಪಟ್ಟೆಗಳಿವೆಯೊ ಎಂಬ ಭ್ರಮೆ ಹುಟ್ಟಿಸುವಂತಿದೆ. ವ್ಶೆಜ್ಞಾನಿಕ ಅಧ್ಯಯನದ ಪ್ರಕಾರ ಜಿóೀಬ್ರದ ಮೈ ಬಣ್ಣ ಹಳದಿ ಇಲ್ಲವೆ ಬಿಳಿ. ಅದರ ಮೇಲೆ ಕರಿಯ ಬಣ್ಣದ ಪಟ್ಟೆಗಳಿವೆ. ಹೊಟ್ಟೆ ಹಾಗೂ ಕಾಲುಗಳ ಒಳಭಾಗದಲ್ಲಿ ಮಾತ್ರ ಪಟ್ಟೆಗಳಿಲ್ಲ.

	ಬರ್ಚೆಲ್ಸ್ ಜಿóೀಬ್ರದ ಮೈಮೇಲಿನ ಪಟ್ಟೆಗಳು ಅಗಲವಾಗಿವೆಯಾದರೆ ಗ್ರ್ವೇವಿಸ್ ಜೀóಬ್ರದಲ್ಲಿ ಇವು ಕಿರಿಯಗಲದವು. ಬೆಟ್ಟಸೀಮೆಯ ಜೀóಬ್ರದಲ್ಲಿ ಬೆನ್ನಮೇಲೆ ಒಂದು ಉದ್ದವಾದ ಮಧ್ಯಪಟ್ಟೆಯುಂಟು. ಇದರಿಂದ ಆಚೀಚೆ ಕೆಲವು ಚಿಕ್ಕ ಅಡ್ಡ ಪಟ್ಟೆಗಳು ಹೊರಡುತ್ತವೆ. ಈ ತೆರನ ವಿನ್ಯಾಸ ಬರ್ಚೆಲ್ಸ್ ಜಿóೀಬ್ರದಲ್ಲಿಲ್ಲ. ಎಲ್ಲ ಜಿóೀಬ್ರಗಳಲ್ಲೂ ಕತ್ತಿನ ಮೇಲೆ ಕುದುರೆಯಲ್ಲಿರುವಂತೆ ಆಯಾಲು ಉಂಟು. ಕಿವಿಗಳು ಬರ್ಚೆಲ್ಸ್ ಜಿóೀಬ್ರzಲ್ಲಿ ಚಿಕ್ಕವು; ಉಳಿದೆರಡು ಬಗೆಗಳಲ್ಲಿ ದೊಡ್ಡವು. ಬಹುಪಾಲು ಜಿóೀಬ್ರಗಳ ಗೊರಸು ಕುದುರೆಯದಕ್ಕಿಂತ ಚಿಕ್ಕದು ಕತ್ತೆಯದಕ್ಕಿಂತ ದೊಡ್ಡದು.

	ಇದು ಸಾವಿರಾರು ಪ್ರಾಣಿಗಳನ್ನೊಳಗೊಂಡ ದೊಡ್ಡ ಹಿಂಡುಗಳಲ್ಲಿ ವಾಸಿಸುತ್ತದೆ. ಸಸ್ಯಾಹಾರಿಯಾದ ಇದಕ್ಕೆ ಹುಲ್ಲು ಪ್ರಧಾನ ಆಹಾರ. ದಿನಕ್ಕೊಮ್ಮೆ ಅಥವಾ ಎರಡು ಸಲ ನೀರು ಕುಡಿಯಲು ಹತ್ತಿರದ ಕೆರೆ, ಕೊಳಗಳಿಗೆ ಬರುವುದು ಇದರ ನಿತ್ಯದ ಕ್ರಮ. ಹೀಗೆ ಬರುವಾಗ ಗುಂಪಿಗೆ ಹೆಚ್ಚು ವಯಸ್ಸಾದ ಗಂಡೊಂದು ನಾಯಕನಾಗಿರುತ್ತದೆ. ಜಿóೀಬ್ರ ಗಂಟೆಗೆ 64 km. ವೇಗದಲ್ಲಿ ಓಡಬಲ್ಲದು.

	ಜಿóೀಬ್ರಕ್ಕೆ ಸಿಂಹವೊಂದೇ ಪ್ರಧಾನ ವೈರಿ. ಇದರಿಂದಾಗಿ ಯಾವಾಗಲೂ ಸಿಂಹದ ಆಕ್ರಮಣದ ಬಗ್ಗೆ ಇದು ಅತಿ ಜಾಗರೂಕತೆಯಿಂದ ಇರುÀತ್ತದೆ. ಇದರ ದೃಷ್ಟಿ ಹಾಗೂ ಘ್ರಾಣಶಕ್ತಿಗಳು ತೀಕ್ಷ್ಣವಾಗಿವೆ. ದೇಹದ ಮೇಲಿನ ಪಟ್ಟೆಗಳಿಂದಾಗಿ ಮರಗಿಡಗಳ ನೆರಳಿನಲ್ಲಿ ನಿಂತಾಗ ಹಿನ್ನೆಲೆಯೊಂದಿಗೆ ಬಹಳ ಚೆನ್ನಾಗಿ ಹೊಂದಿಕೊಂಡು ಸಿಂಹದ ದೃಷ್ಟಿಯಿಂದ ತಪ್ಪಿಸಿಕೊಳ್ಳುವುದು.

	ಜಿóೀಬ್ರದಲ್ಲಿ ಸಂತಾನಾಭಿವೃದ್ಧಿಗೆ ನಿರ್ದಿಷ್ಟ ಶ್ರಾಯವಿಲ್ಲ. ಗರ್ಭ ನಿಂತ 345-390 ದಿವಸಗಳ ಅನಂತರ ಒಂದೇ ಒಂದು ಮರಿ ಹುಟ್ಟುತ್ತದೆ. ಜಿóೀಬ್ರದ ಆಯಸ್ಸು ಸಾಮಾನ್ಯವಾಗಿ 15 ವರ್ಷಗಳು. ಪ್ರಾಣಿ ಸಂಗ್ರಹಾಲಯಗಳಲ್ಲಿ 28 ವರ್ಷ ಬದುಕಿದ ದಾಖಲೆಗಳುಂಟು. ಚರ್ಮಕ್ಕಾಗಿ ಇಲ್ಲವೇ ಷೋಕಿಗಾಗಿ ಜಿóೀಬ್ರವನ್ನು ಬೇಟೆಯಾಡುವುದಿದೆ. ಆಫ್ರಿಕದ ಕೆಲವು ಕಡೆ ಇದನ್ನು ಪಳಗಿಸಿ ಕುದುರೆ ಕತ್ತೆಗಳಂತೆ ಗಾಡಿಗೆ ಕಟ್ಟುವದೂ ಉಂಟು. ಇದು ಬಲು ಮೊಂಡು ಸ್ವಭಾವದ್ದೂ ಬೇಗ ಆಯಾಸಗೊಳ್ಳುವಂಥದೂ ಆಗಿರುವುದರಿಂದ ಅಷ್ಟು ಉಪಯುಕ್ತವಲ್ಲ.
(ಪಿ.ಎಸ್.ಆರ್)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ